ಪೋಸ್ಟ್‌ಗಳು

ಗಾಳಿಯೂ ಸರಕಿಲ್ಲಿ

ಇಮೇಜ್
ಪಿ ಆರ್ ವೆಂಕಟೇಶ್ ಗಾಳಿಯೂ ಸರಕಿಲ್ಲಿ 〰〰〰〰〰〰〰 ಭ್ರಮೆಯ ಉನ್ಮಾದ ತುಟ್ಟತುದಿಗೇರಿದ ಭಾವವೇ ದೇವರಿಲ್ಲಿ ನಿಗೂಢ ಗರ್ಭ ಗುಡಿಯೊಳಗೆ ಅರಿವೆ ಇಲ್ಲದ  ಪೂಜಾರಿ ಬೆತ್ತಲು ಮಂತ್ರ ಸಲಹೆಯ ವೇದಘೋಷ ಎಲ್ಲದರ ಮುಂದೆ  ಮಂಡೆಯೂರಿದ ನಂಬುಗೆಯ  ಜನ  ಗೊಂಬೆ ಮುಂದಿನ ಗೊಂಬೆ. ಅನೀತಿ ಕುತಂತ್ರಗಳೇ ರಾಜಧರ್ಮ ಹಸಿದ ಕರುಳಿನ ಕೊರಳಿಗೆ ಹಣತೆಯ ಎಣ್ಣೆ ಜಿಡ್ಡಿಗೆ ಮೂಗರಳಿಸಿ ಕಾಲೆತ್ತುವ ನಾಯಿ ಎಂಜಲೆಲೆ ಪ್ರಜೆಗೆ ಹಳಸಿನ ಪಾಲಾದ ಪ್ರಜಾರಾಜ್ಯ. ಉಸಿರು ತೇಕುತ್ತಿದೆ ಒಡಲು ಬೆಲೆ ಬಂಧಕೆ ಸಿಲುಕಿದ ಗಾಳಿಗೆ ಸಾವು ಕುದುರೆ ಏರಿದಾಗಲೇ ಉಸಿರು ತುಂಬುವ ಗಾಳಿ ಸರಕು ಪ್ರಾಣಯಾತ್ರೆ ಅಬ್ಬರಕೆ ಹೆಣದ ಸುನಾಮಿ ಸಾವಿನ ತತ್ತರಕ್ಕೆ ಹೀಚಿದ ಮಸಣಗಳು  ಏನಿಲ್ಲ  ಇಲ್ಲಿ ನನ್ನ ನಾಡಲ್ಲಿ ಪ್ರಾಣಗಳ ಪಣಕಿಟ್ಟ ಮುಗಿಲೆತ್ತರ ಗೋಪುರ ಕೋಟಿ ಕೋಟಿ ಕಾಣಿಕೆಯ ಪ್ರತಿಮೆಯ ಅಂತಃಪುರ ತಂತ್ರಾಲೋಚನೆಯ ಆಲಯಕ್ಕ ಕೊಟಿ ಬೆಲೆಯ ಪಾರ್ಲಿಮೆಂಟು ದೊರೆಯೇ ದಿಕ್ಕೆಟ್ಟ ಜೀವದುಸಿರು ಸಾವಿಗೆ ಶರಣು ಪ್ರಾಣ ಗಾಳಿಗೂ ದರ ನಿಗದಿ. ಇಲ್ಲಿ ಜಗಮಗಿಸುವ ನನ್ನ ನಾಡಿನಲ್ಲಿ ಉಸಿರೂ  ಗಾಳಿಯೂ  ಮಾರುಕಟ್ಟೆಯ ಸರಕು. ಪಿಆರ್. ವೆಂಕಟೇಶ್.

*ಅಕ್ಕ ಸುಬ್ಬಕ್ಕನ ಪ್ರವಚನ.* - *ಮಚ್ಚೇಂದ್ರ ಪಿ ಅಣಕಲ್

ಇಮೇಜ್
              ಮಚ್ಚೇಂದ್ರ ಪಿ ಅಣಕಲ್   _______________________________________ ಮಚ್ಚೇಂದ್ರ ಪಿ ಅಣಕಲ್ ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದಲ್ಲಿ 12-06-1979 ರಂದು ಜನಿಸಿದರು. ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರು. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಎಂ.ಇಡಿ ಪದವೀಧರರು.  ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ 'ಲಾಟರಿ'ಕತೆ  ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ  'ಡಾಂಬಾರು ದಂಧೆ' ಕತೆ ಬಹುಮಾನ ಪಡೆದು 'ದೀಪಾತೊರಿದೆಡೆಗೆ'  ಕಥಾ ಸಂಕಲನದಲ್ಲಿ  ಪ್ರಕಟಗೊಂಡಿದೆ. ಬೆಳಗಾವಿಯಲ್ಲಿ ನಡೆದ 4ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ  ಇವರ ' ಮೊದಲ ಗಿರಾಕಿ '  ಕಥಾ ಸಂಕಲನಕ್ಕೆ ಉತ್ತಮ ಕಥಾ ಪುಸ್ತಕ ಪ್ರಶಸ್ತಿ , ಆಕಾಶವಾಣಿ ದೂರದರ್ಶನ, ನಾಡಿನ ವಿವಿಧ ಪತ್ರಿಕೆಗಳಲ್ಲಿ ಕತೆ-ಕವನಗಳು ಪ್ರಕಟವಾಗಿವೆ. ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬೇಲೂರಿನ ಉರಿಲಿಂಗ ಪೆದ್ದಿ ಮಠದಿಂದ ರಾಜ್ಯಮಟ್ಟದ ಮೊ...

*ಔತಣ* -ರಾಜಶೇಖರ ಕುಕ್ಕುಂದಾ –ಬಾಗಲಕೋಟೆ

ಇಮೇಜ್
ರಾಜಶೇಖರ ಕುಕ್ಕುಂದಾ –ಬಾಗಲಕೋಟೆ  ______________________________________ ರಾಜಶೇಖರ ಕುಕ್ಕುಂದಾ’ ಕಾವ್ಯನಾಮದೊಂದಿಗೆ ಬರೆಯುವ ರಾಜಶೇಖರ ಅಲ್ಲೂರಕರ್ ಅವರು ಮೂಲತಃ ಬಾಗಲಕೋಟೆಯ ಬಸವೇಶ್ವರ ಎಂಜಿನೀಯರಿಂಗ್ ಕಾಲೇಜಿನಲ್ಲಿ ಸಂಯೋಜಿತ ಪ್ರಾಧ್ಯಾಪಕರು. ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.  ಕೃತಿಗಳು:   ಚೆಲುವ ಚಂದಿರ,  ಗೋಲಗುಮ್ಮಟ, ಮತ್ತು ಪುಟಾಣಿ ಪ್ರಾಸಗಳು (ಮಕ್ಕಳ ಕವನ ಸಂಕಲನಗಳು), ತಾಂತ್ರಿಕ ವಿಷಯಗಳ ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕವಿತೆಗಳು ಸಿ. ಬಿ. ಎಸ್. ಇ. ಕನ್ನಡ ಭಾಷೆಯ ಪಠ್ಯದಲ್ಲಿ, ಕರ್ನಾಟಕ ಮತ್ತು ಮಹಾರಾಷ್ಟ್ರದ ಪಠ್ಯಪುಸ್ತಕಗಳಲ್ಲಿ ಮತ್ತು ಶಿಶುಗೀತೆಯ ಅಲ್ಬಂಗಳಲ್ಲಿ ಸೇರಿವೆ. ಕವಿತೆಗಳು ಮತ್ತು ಲೇಖನಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಮತ್ತು ನಿಯತಕಾಲಿಕೆಗಳಲ್ಲಿ ಬೆಳಕು ಕಂಡಿವೆ; ಆಕಾಶವಾಣಿಯಲ್ಲಿ ಮಕ್ಕಳ ಧಾರಾವಾಹಿ ಮತ್ತು ಕವಿತೆಗಳು ಪ್ರಸಾರಗೊಂಡಿವೆ. ಪುರಸ್ಕಾರಗಳು:  ಪ್ರಜಾವಾಣಿ ದಿನಪತ್ರಿಕೆಯ ದೀಪಾವಳಿ ಶಿಶು ಕಾವ್ಯ ಸ್ಪರ್ಧೆಯಲ್ಲಿ ಹಲವು ಬಾರಿ ಬಹುಮಾನ, ಶಿವಮೊಗ್ಗದ ಕರ್ನಾಟಕ ಸಂಘವು ಮಕ್ಕಳ ಸಾಹಿತ್ಯಕ್ಕೆ ನೀಡುವ 2012 ನೇ ಸಾಲಿನ ‘ನಾ ಡಿಸೋಜಾ’ ಪುರಸ್ಕಾರ, 2013 ನೇ ಸಾಲಿನ ‘ಅಮ್ಮ’ ಪುರಸ್ಕಾರ ಪಡೆದಿದ್ದಾರೆ. ಕೃಪೆ:ಬುಕ್ ಬ್ರಹ್ಮ ಇಗೋ ಅವರದ್ದು ಒಂದು ಕವಿತೆ             ...

*ನಾವು ಹುಡುಗಿಯರೇ ಹೀಗೆ* - ಪ್ರತಿಭಾ ನಂದಕುಮಾರ್

ಇಮೇಜ್
*ಪ್ರತಿಭಾ ನಂದಕುಮಾರ್* ಲೇಖಕಿ ಪ್ರತಿಭಾ ನಂದಕುಮಾರ್ ಅವರು ಮೂಲತಃ ಬೆಂಗಳೂರಿನವರು. 1955 ಡಿಸೆಂಬರ್ 15ರಂದು ಜನಿಸಿದರು. ತಂದೆ-ವಿ. ಎಸ್. ರಾಮಚಂದ್ರರಾವ್, ತಾಯಿ- ಯಮುನಾಬಾಯಿ. ಬಾಲ್ಯದ ಬಹುದಿನಗಳನ್ನು ಬೆಂಗಳೂರು ಮತ್ತು ಮೈಸೂರಿನಲ್ಲಿ ಕಳೆದಿರುವ ಪ್ರತಿಭಾ, ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿ ಪಡೆದಿದ್ದಾರೆ. ಎನ್.ಜಿ.ಎಫ್‌ನಲ್ಲಿ ಭಾಷಾಂತರಕಾರರಾಗಿ ನಂತರ ಇಂಡಿಯನ್ ಎಕ್ಸ್‌ಪ್ರೆಸ್, ಡೆಕ್ಕನ್ ಹೆರಾಲ್ಡ್ ಮತ್ತು ಅಗ್ನಿ ಪತ್ರಿಕೆಗಳಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಸಿನಿಮಾ ರಂಗದಲ್ಲಿಯೂ ಸಹಾಯಕ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಪತಿ ನಂದಕುಮಾರ್ ಹಾಗೂ ಮಕ್ಕಳು ಅಭಿರಾಮ್ ಮತ್ತು ಭಾಮಿನಿ ಜೊತೆ ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಪ್ರತಿಭಾ ನಂದಕುಮಾರ್ ಕಾವ್ಯಧರ್ಮವನ್ನೇ ತಮ್ಮ ಮನೋಧರ್ಮವನ್ನಾಗಿಸಿಕೊಂಡಿರುವ ಕವಿ. ಅವರ ವೈಯಕ್ತಿಕ ಮತ್ತು ವೃತ್ತಿ ಬದುಕುಗಳೆರಡರಲ್ಲೂ ನಿರಂತರ ಸಾಹಸ ಮತ್ತು ಪ್ರಯೋಗಗಳನ್ನು ನಡೆಸಿದವರು. ಉತ್ಕಟವಾಗಿ ಜೀವಿಸುವುದೇ ಬದುಕಿನ ಪರಮ ಸತ್ಯವನ್ನು ತಿಳಿಯಲು ಇರುವ ಏಕೈಕ ದಾರಿ ಎಂದು ನಂಬಿರುವ ಪ್ರತಿಭಾ ಅದೇ ಉತ್ಕಟತೆಯನ್ನು ತಮ್ಮ ಕವಿ ಸಮಯದುದ್ದಕ್ಕೂ ಕಾದುಕೊಂಡಿದ್ದಾರೆ. ಅವರ ಪ್ರಕಟಿತ ಪುಸ್ತಕಗಳು- ನಾನು ಹುಡುಗಿಯರೇ ಹೀಗೆ, ಈತನಕ, ರಸ್ತೆಯಂಚಿನ ಗಾಡಿ, ಕವಡೆಯಾಟ, ಆಹಾ ಪುರುಷಾಕಾರಂ, ಅವರು ಪುರಾವೆಗಳನ್ನು ಕೇಳುತ್ತಾರೆ, ಮುನ್ನುಡಿ ಬೆನ್...

"ಬಿಕರಿಗಿಟ್ಟ ಮೇಟಿವಿದ್ಯೆ ಮೇಣಿಹಾಲು!" - ಡಾ.ವಡ್ಡಗೆರೆ ನಾಗರಾಜಯ್ಯ

ಇಮೇಜ್
ಬಿಕರಿಗಿಟ್ಟ ಮೇಟಿವಿದ್ಯೆ ಮೇಣಿಹಾಲು! ******************************* ನನ್ನ ಅಪ್ಪ ನೇಗಿಲಿಡಿದು ಬಯಲುಕ್ಕೆಯ ಉಳುತ್ತಿರುವಾಗ ಅಲ್ಲೊಬ್ಬ ಬದುವಿನಗುಂಟ ನಡೆದು ಹೋಗುತ್ತಿದ್ದ ಹಾಲುಗಲ್ಲದ  ಹುಡುಗನನ್ನು ಕೂಗಿ ಕರೆವುದನ್ನು ನಾನು ಕಂಡಿದ್ದೆ, "ಅಪ್ಪದೋ ಕಂದಾ...!  ನಿಂಗೆ ಮೇಣಿಹಾಲು ಕುಡಿಸ್ತೀನಿ ಬಾರೋ...!" ಆ ಹುಡುಗನ ಕೈಹಿಡಿದ ನನ್ನಪ್ಪ ಅವನ ಅಂಗೈಗಳಿಂದ ನೇಗಿಲ ಮೇಣಿ ಹಿಡಿಸಿ  ಸೀಳುಕ್ಕೆಯಲ್ಲಿ ಮೂಡಿದ ಕುಳದ ಗೆರೆಗುಂಟ ಹಸಿರು  ಅಕ್ಷರದ ಮೇಣಿಹಾಲನೆರೆಯುತ್ತಿದ್ದ! ಎತ್ತುಗಳ ಹೆಗಲಿಗೆ ನೊಗವೂಡಿ ನೇಗಿಲ ಮೇಣಿ ಹಿಡಿದು ಮೇಟಿ ವಿದ್ಯೆಯ ಕಲಿವುದನ್ನು 'ಮೇಣಿಹಾಲು ಕುಡಿಯುವುದು'  ಎಂದು  ಭೂಸ್ತನ್ಯ ಜನನಿಗೆ ಹೋಲಿಸಿರುವ ಸೋಜಿಗದ ವಿದ್ಯೆ ಇದು! ನನಗೂ ಹೀಗೆಯೇ ನಮ್ಮೂರ ತಿಗಳರ ಬಯಲಪ್ಪ ಮೇಣಿಹಾಲು ಕುಡಿಸಿ ಮೇಟಿ ವಿದ್ಯೆಯ  ಪ್ರಥಮ ಪಾಠಗಳನ್ನು ಕಲಿಸಿದ್ದ ನೆನಪಾಯಿತು. ನೇಗಿಲಿಡಿದು ಉಳುವ ಗಂಡು ಕೂಡಾ ಮೇಣಿಹಾಲು ಕುಡಿಸುವ  ಹೆಣ್ಣಾಗುವ ತಾಯ್ತನದ ಬೆಡಗನ್ನು ಕಂಡು ಬೆರಗಾದೆ! ಬಯಲ ಬದುವಿನಗುಂಟ ನಡೆಯುತ್ತಿದ್ದ ಆ ಹುಡುಗ ನನ್ನಪ್ಪ ಕುಡಿಸಿದ ಮೇಣಿಹಾಲು ಕುಡಿದು ಅವನ ಅಂಗೈನಲ್ಲಿ ಪರಂಜ್ಯೋತಿ ಉರಿದಿತ್ತು!  ಆ ಹುಡುಗನ ಬದುಕಿನ ಬಯಲುಕ್ಕೆ ಹಸಿರು ಪತ್ತಲವನುಟ್ಟು ನಕ್ಕಿತ್ತು. ಲಾಭನಷ್ಟ ಕ್ರಯ ವಿಕ್ರಯಗಳ ಬಾಬತ್ತಿಲ್ಲದೆ ಜೀವರಸದ ಬಾಳುವೆಗೆ ಅನ್ನರಸವನೀಯುವ ವಿದ್ಯೆಯ ಕಲಿಸುವ  ರೈತನ ಬೆನ...

"ಎಲ್ಲೆಲ್ಲೂ ಬೆಳಕು" - ವೆಂಕಟೇಶ್ ಪಿ. ಆರ್

ಇಮೇಜ್
ವೆಂಕಟೇಶ್ ಪಿ.ಆರ್ __________________ "ಎಲ್ಲೆಲ್ಲೂ ಬೆಳಕು"              - ವೆಂಕಟೇಶ್ ಪಿ.ಆರ್                 ಹಿರಿಯ ಸಾಹಿತಿಗಳು                      ಬಳ್ಳಾರಿ ಎಲ್ಲಲ್ಲೂ ಬೆಳಕೆ ಮನೆಯಲ್ಲಿ ಬೀದಿಯಲ್ಲಿ ಗಲ್ಲಿಗಲ್ಲಿಯಲ್ಲಿ ಜಗಮಗಿಸುವ ಬೆಳಕು ಕಾಣಲಾರದು ಧರೆಯು ಹೊಳೆಯಲಾರದು ಬಾನು  ಎಲ್ಲಲ್ಲೂ ಕಾರಿರುಳು ಕಡೆದ ಕುರುಡು. ಎಲ್ಲಲ್ಲೂ ಬೆಳಕೆ ಗಾಳಿಗೆ ಓಡುತ್ತೆ  ಮಳೆಗೆ ಆರುತ್ತೆ ಎತ್ತೆತ್ತಲೋ ಹಾರಿ  ಮಹಡಿಯ ಸೇರುತ್ತೆ ಬಲವಿಲ್ಲದ ಕೈ ಹೊಸೆದ ನಿತ್ರಾಣದ ಬತ್ತಿ  ಎಣ್ಣೆ ಇಲ್ಲದ ಹಣತೆಯಲ್ಲಿ  ಏನು ಕಾಣುತ್ತಿ ಮೈಸುಳಿವ ಮಿಂಚಿಲ್ಲ,  ಕಾವು ತಾಕುತ್ತಿಲ್ಲ ಕುಡಿ ಇಲ್ಲ ಕಣ್ಣಿಲ್ಲ ಊದಿಹೊತ್ತಿಸಲು ಕೆಂಪು ಕೆಂಡವೂ ಇಲ್ಲ. ಕಾಡಾನೆಗತ್ತಲಪ್ಪಿ  ಬೇಸತ್ತ ಜನ ಬಸವಳಿದ ಬಾಯ್ತುಂಬ ಶಪಿಸಿದ್ದಾರೆ ಮನ ಸಾಯಬೇಕಿದೆ ಬೆಳಕು ಹಂಗಿನೊಳಗೆ ಅಳುಕು ಇದರೊಳಗೆ ಗೂಂಯ್ಗುಡುವ  ಸೊಳ್ಳೆಗಳ ತಿವಿತ ತಡವರಿಸುವ ಜೀವಕೆ ಕತ್ತಲ ಕವಿತ ರಾತ್ರಿಯೆಲ್ಲಾ ನಿದ್ದೆಗೆಟ್ಟು ಕಂಗೆಟ್ಟ ಜನ ಕಣ್ಣಮುಚ್ಚಿ ಕನಸಿದ್ದಾರೆ ಭರವಸೆಯ ಬನ ರೆಪ್ಪೆ ಬಾಗಿಲ ತಟ್ಟಿ ಕಣ್ಣ ಕವಡಿಯ ಮೀಟಿ ಕತ್ತಲ ಪೊರೆ ಹರಿದು  ಮೈ ತುಂಬಿ ಹಾಡಿದೆ ಸದ್ದುಗದ್ದಲವಿಲ್ಲ...

"ಮರೆತ ಧರೆಯ ನೆನೆದು" - ನಾ. ದಿವಾಕರ್

ಇಮೇಜ್
ನಾ ದಿವಾಕರ ಕೋಲಾರ ಜಿಲ್ಲೆಯ ಬಂಗಾರಪೇಟೆಯವರಾದ ನಾ. ದಿವಾಕರ ಕೆನರಾ ಬ್ಯಾಂಕಿನಲ್ಲಿ 35 ವರ್ಷದ ಸೇವೆಯ ಬಳಿಕ ಸ್ವಯಂ ನಿವೃತ್ತಿಯಾದವರು. ಪ್ರವೃತ್ತಿಯಿಂದ ಲೇಖಕರು. ಅನೇಕ ಲೇಖನ ಬರಹ, ಅನುವಾದ ಮತ್ತು ಕವಿತೆಗಳನ್ನು ರಚಿಸಿದ್ದಾರೆ . ದಿವಾಕರ್ ಅವರ ಇಪ್ಪತ್ತಕ್ಕೂ ಹೆಚ್ಚು ಪುಸ್ತಕಗಳು ಪ್ರಕಟವಾಗಿದ್ದು, ಪ್ರಥಮ ಕವನ ಸಂಕಲನ ಅಚ್ಚಿನಲ್ಲಿದೆ. ಇಗೋ ಅವರದ್ದು ಒಂದು ಕವಿತೆ ಓದಿಗೆ: ಮರೆತ ಧರೆಯ ನೆನೆದು               -ನಾ ದಿವಾಕರ               ಹಿರಿಯ ಸಾಹಿತಿಗಳು ಅಂದು ಧಾರೆಯ ನಡುವೆ ರಂಗುರಂಗಿನ ಕಾಳುಗಳು ಮಳೆಗರೆಯುತಿದ್ದಾಗ 'ಧರೆ' ಏಕೋ ನೆನಪಾಗಲೇ ಇಲ್ಲ ಕಣ್ಣಂಚಿನ ಹನಿಯನಳಿಸಿ ಅಮ್ಮ ಸಂತೈಸಿದಾಗ ಮನ ಹೇಳಿತು ಅದು ಕುಂಕುಮ ಧೂಳೆಂದು ಸಲಹಿದ 'ಧರೆ' ಏಕೋ ನೆನಪಾಗಲೇ ಇಲ್ಲ ;  ಪಥಿಕನ ಬಾಹುಗಳಲಿ ಹಾಲು ಬೆಳದಿಂಗಳಿತ್ತು ದಿಗಂತದ ಪ್ರಣತಿ ಜ್ವಲಿಸುತ್ತಲೇ ಇತ್ತು ತೆರೆದ ಕಂಗಳು ಸಂತಸದ ಮನ ತುಂಬು ಹೃದಯದ ನಡುವೆ ಹಿಮ್ಮೇಳದ ಸವಿ ಇಂಪು ಝಗಮಗಿಸುವ ತೋರಣಗಳಲಿ ನಾಳಿನ ಸುಂದರ ಕನಸು 'ಧರೆ' ನೆನಪಾಗಲೇ ಇಲ್ಲ ;  ಬೊಟ್ಟಿಟ್ಟರು ದೃಷ್ಟಿತೆಗೆದರು ಹೆಂಗರುಳಿನ ಆರತಿ ತಟ್ಟೆಯಲಿ ಪುಡಿಗಾಸು ಕಂಡಾಗ ಎನಿಸಿದ್ದು,, ನನ್ನದೇನಿದೆ ? ಸತ್ಯ ಅಲ್ಲವೇ ಅಂದ ಚೆಂದ ಬಂಧ  ಪಡೆದದ್ದಷ್ಟೇ,, ನೆಟಿಕೆಗಳ ಸದ್ದು ಭಾರವಾದ ಹೆಜ್ಜೆಗಳೆನಿಸಿತು ಎಷ್...