"ಬರ್ತಡೇ ಸಂಬ್ರಮ ಬಲು ಜೋರು" - ಬಸಂತ್ ಡಿ.ಯು
ಬರ್ತ್ಡೇ ಸಂಭ್ರಮಗಳು ಬಲು ಜೋರು
- ಬಸಂತ್ ಡಿ.ಯು
ವಿದ್ಯಾರ್ಥಿ
. ಹೊಸಪೇಟೆ
ಅದೇನೋ ಗೊತ್ತಿಲ್ಲ, ಕೇರಿಗಳಲ್ಲಿ ಯಾರದ್ದೋ ಮಕ್ಕಳ ಹುಟ್ಟುಹಬ್ಬ ಆಚರಣೆ ಮಾಡುತ್ತಿದ್ದಾರೆ ಅಂದರೆ ಅದೇನೋ ಕುತೂಹಲ ಸಂಭ್ರಮ ನಮಗೆ, ಅವರು ಕರೆದರು ಕರೆಯದೆ ಇದ್ದರು ನಮ್ಮ ಹಾಜರಾತಿ ಮಾತ್ರ ಕಾಯಂ ಆಗಿ ಇರುತಿತ್ತು. ಇತ್ತೀಚಿನ ದಿನಗಳಲ್ಲಿ ಆ ಬರ್ತ್ಡೇ ಆಚರಣೆ ಮಾಡುವುದೇ ಒಂದು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ ಅದು ಬೇರೆ ಮಾತು ಬಿಡಿ. ನಮ್ಮದು ಕೇರಿಯ ಸಾಮಾನ್ಯ ವರ್ಗದ ಕೆಳ ಸ್ತರದ ಕುಟುಂಬ, ಊಟಕ್ಕೆ ಇದ್ದರೆ, ಬಟ್ಟೆಗಿಲ್ಲ ತಟ್ಟೆಗಿದ್ದರೆ ಹೊಟ್ಟೆಗಿಲ್ಲ ಎನ್ನುವ ಪರಿಸ್ಥಿತಿ. ಆದರೂ ಹೇಗೋ ಜನಕ ಮನೆಯ ಕಟ್ಟಪ್ಪಣೆ ಪಾಲಿಸಬೇಕಾದ ಅನಿವಾರ್ಯತೆ ಇದ್ದ ಕಾರಣ ಅದೇ ಹೇಗೆ ಮನೆಯ ಆರ್ಥಿಕತೆ ಪರಿಸ್ಥಿತಿಯನ್ನ ನಿರ್ವಹಣೆ ಮಾಡುತ್ತಿದ್ದರೋ ಗೊತ್ತಿಲ್ಲ. ಐದು ಜನ ಹೊಡಹುಟ್ಟಿದವರು ಅವರು ಅವರ ಮಕ್ಕಳು ಅವರೊಟ್ಟಿಗೆ ನಾವು ಇಂತಹ ಸಮಯದಲ್ಲಿ ನಾವುಗಳು ಬರ್ತ್ಡೇ ಅನ್ನುವ ಕಲ್ಪನೆಯನ್ನ ಕನಸಲ್ಲೂ ಯೋಚಿಸಲು ಸಾಧ್ಯವಿರಲಿಲ್ಲ. ನಾವು ಕೇಕೋ ಅಲ್ಲಿ ಕೊಡುತ್ತಿದ್ದ ಚೂರು-ಪಾರು ಖಾರದ ಆಸೆಗೆ ಹೋಗುತ್ತಿದ್ದು ನಿಜ, ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಆ ಸಂಭ್ರಮ-ಸಡಗರವನ್ನ ನೋಡಲೇ ಹೋಗುತ್ತಿದೆವು ಆ ಟೋಪಿ, ಮನೆಯನ್ನ ಹಬ್ಬಕ್ಕೆ ಮಾಡಿದಂತೆ ಸಿಂಗಾರ, ಹೊಸ ಬಟ್ಟೆ ಇವೆಲ್ಲ ನಮ್ಮ ಪಾಲಿಗೆ ಒಂದು ಕನ್ನಸೇ ಸರಿ. ಶಿಸ್ತಾಗಿ ತಿನ್ನಲು ಕೊಡುತ್ತಿದ್ದ ಸಮಯದಲ್ಲಿ ಹೋಗಿ ಲೈನಲ್ಲಿ ನಿಂತು ಅವರು ಕೊಟ್ಟದ್ದನ್ನು ತಾಯವ್ವನ ಗುಡಿಯ ಕಟ್ಟೆಗೆ ಕೂತು ಖಾಲಿ ಮಾಡಿ ಮನೆಗೆ ಬಾಯಿ ಒರೆಸಿಕೊಳ್ಳದೆ ಹೋಗುತ್ತಿದೆವು, ಮನೆಯವರಿಗೆಲ್ಲ ಗೊತ್ತಾಗಲಿ ನಾನು ಕೇಕ್ ತಿಂದು ಬಂದೆ ಅಂತ ಹಾಗೆ ಬಿಟ್ಟುಕೊಂಡು ಹೋಗುತ್ತಿದ್ದೆವು. ಇದೆಲ್ಲ ಆಗಿ ರಾತ್ರಿ ಮಲುಗುವ ಹೊತ್ತಲ್ಲಿ ಅವ್ವನ ತೊಡೆಯ ಮೇಲೆ ತೆಲೆ ಇಟ್ಟು "ಯಾಕ್ಕವ್ವ ನಮಗೆ ಈ ಬರ್ತ್ಡೇ-ಗಿರ್ತ್ಡೇ ಮಾಡಲ್ಲ, ಯವ್ವ ಒಂದೇ ಸಲ ನಂದು ಹ್ಯಾಪಿ ಬರ್ತ್ಡೇ ಮಾಡ್ರವ್ವ ಅನ್ನುತ್ತಿದೆ, ಆಗ ಅವ್ವ,ಸರಿಯಾಗಿ ಮೂರು ಹೊತ್ತು ಉಣ್ಣಲು ಇಲ್ಲದ ಮನೆಯಲ್ಲಿ ಹುಟ್ಟುಹಬ್ಬದ ಆಚರಣೆ ಎಂದರೆ ತುಸು ಹೆಚ್ಚೇ ಖರ್ಚಾಗುತ್ತಿತ್ತು ನಮ್ಮ ಪಾಲಿಗಂತೂ ಅದು ಎಟುಕದ ಮಾತು, ಇದನೆಲ್ಲ ನೆನೆಯುತ್ತಿದ್ದ ಅವ್ವ ನನ್ನ ಮಕ್ಕಳ ಈ ಬಹು ದಿನದ, ಪುಟ್ಟ ಬಯಕೆಯನ್ನ ಈಡೇರಿಸಲು ಆಗುತ್ತಿಲವಲ್ಲ ಎಂಬ ಅಸಹಾಯಕತೆಯನ್ನ ಮುಖದಲ್ಲಿ ತೋರಿಸುತ್ತಿದ್ದಳು. ಅವ್ವ-ಅವ್ವ ಏನ್ ಯೋಚನೆ ಮಾಡ್ತಿದ್ದಿ ಬೇಯ್ ಅಂದರೆ ಅದೇನ್ ಬುಡು ಮಗ ದೊಡ್ಡ ವಿಚಾರ ಅಲ್ಲ ಮುಂದಿನ ನಿನ್ನ ಹುಟ್ದಬಕ್ಕೆ ಹೊಸ ಅಂಗಿ-ಪ್ಯಾಂಟು ಹೊಲಿಸಿ, ಹಂಪಿಗೆ ಹೋಗೋಣರಂತೆ ಅಂದು ಸಮಾಧಾನ ಪಡಿಸುತ್ತಿದಳು. ಪ್ರತಿ ಬಾರಿ ಈ ವಿಷಯ ಮುಂದಿಟ್ಟಗೆಲ್ಲ ಏನೋ ಕಾರಣ ಕೊಟ್ಟ ನಮ್ಮ ಆಸೆಯನ್ನ ಜೀವಂತವಾಗಿಡುತ್ತಿದಾಳೆ ಹೊರತು ಅದು ನಮ್ಮ ಜೀವನದಲ್ಲಿ ಇಂದಿಗೂ ನನಸ್ಸಾಗದ ಕನಸ್ಸುಗಳಲ್ಲಿ ಒಂದು. ನಮಂತ ಮಧ್ಯಮ ವರ್ಗದ ಕುಟುಂಬಗಳಲ್ಲಿ ಹುಟ್ಟಿದ ಮಕ್ಕಳ ಎದೆಯಲ್ಲಿ ಇನ್ನು ಎಷ್ಟೋ ಆಸೆಗಳು ಇಂದಿಗೂ ಜೀವಂತವಾಗಿವೆ. ಆದರೆ ಇಂದಿನ ದಿನಗಳಲ್ಲಿ ಹಾಗಲ್ಲ ಜೇಬಲ್ಲಿ ದುಡಿಲ್ಲದಿದ್ದರೂ ಪರವಾಗಿಲ್ಲ ಸಾಲ ಮಾಡಿಯಾದರೂ ಮಾಡ್ತೀನಿ ಅನ್ನೋ ಹಠದ ಜನ ಇದ್ದರೆ, ಪಕ್ಕದ ಮನೆಯವರು 2ಕೆಜಿ ಅಂತೇ ನಂದು 4ಕೆಜಿ ಇರ್ಲಿ ಅನ್ನೋ ಮನೋಭಾವವನ್ನ ಬೆಳೆಸಿಕೊಂಡಿದ್ದಾರೆ. ಇದು ತಪ್ಪು ಎಂದು ನಾನು ಹೇಳುತ್ತಿಲ್ಲ ನಿಮ್ಮ ಮಕ್ಕಳ ಹುಟ್ಟುಹಬ್ಬ ಆಚರಣೆ ಮಾಡಿಬೇಡಿ ಎನ್ನಲು ನಾನ್ಯಾರು ಆದರೆ ಹುಟ್ಟುತ್ತಲೇ ಏನು ಗೊತ್ತಿಲದ ಆ ವಯಸ್ಸಲ್ಲಿ ಆ ಮಕ್ಕಳಿಗೆ ಕೇಕು, ಬರ್ತ್ಡೇ ವಿಶೇಷ ಉಡುಗೊರೆಗಳು,ಪಾರ್ಟಿ ಇವೆಲ್ಲ ಮಕ್ಕಳಿಗೆ ಹೆತ್ತವರು ಶ್ರೀಮಂತರು ಕೇಳಿದರೆ ಏನು ಬೇಕಾದರೂ ಕೊಡಿಸುತ್ತಾರೆ ಅನ್ನೋ ಭಾವನೆಯನ್ನ ಬೆಳೆಸಿಕೊಳ್ಳುತ್ತಾರೆ. ಅಲ್ಲೇ ನಿಮ್ಮ ಬದುಕಿನ ಒಂದು ವಿಷಾದದ ಅಧ್ಯಾಯ ಆರಂಭವಾಗುತ್ತದೆ ಅಲ್ಲಿ ಮಕ್ಕಳಿಗೆ ನೀವು ಹೇಗೆ ತಂದಿರಿ ಅನ್ನೋದು ಕಾಣೋದಿಲ್ಲ ತಂದಿದ್ದು ಮಾತ್ರ ಕಾಣುತ್ತದೆ ಅಲ್ಲಿಗೆ ನೀವು ಅವರ ಯಾವುದಾದರು ಒಂದು ಬೇಡಿಕೆಯನ್ನ ಪೂರೈಸಲು ಶಕ್ತರಾಗದಿದ್ದರೆ ನಿಮನ್ನ ಬೈಯಲು,ತೆಗಳಲು ಪ್ರಾರಂಭ ಮಾಡುತ್ತಾರೆ ಅದಕ್ಕೆ ಮಕ್ಕಳಿಗೆ ಮೊದಲೇ ಚೂರು ಕಷ್ಟದ ರುಚಿ ತೋರಿಸಿ ಆಗಲೇ ಅವರಿಗೂ ಗೊತ್ತಾಗೋದು ಮನೆಯ ಪರಿಸ್ಥಿತಿ ಏನು ಅಂತ. ಹೋಗ್ಲಿ ಹುಟ್ಟುಹಬ್ಬ ಅಂದರೇನು ಅಂತಲೇ ಇನ್ನು ಕೆಲ ಜನಕ್ಕೆ ಗೊತ್ತೇ ಇರುವುದಿಲ್ಲ, *ಡಾ.ಏ.ಪಿ. ಜೆ. ಅಬ್ದುಲ್ ಕಲಾಂರವರು ಹುಟ್ಟುಹಬ್ಬದ ಕುರಿತಾಗಿ ಕೇಳಿದಾಗ ಹೀಗೆ ಹೇಳುತ್ತಾರೆ "ಅದೊಂದು ನೀವು ಅತ್ತಿದಿದ್ದು ನೀವು ಅತ್ತಿದನ್ನು ಕಂಡು ನಿಮ್ಮ ಹೆತ್ತವರು ನಕ್ಕಿದು"ಅಂತ. ಹುಟ್ಟುಹಬ್ಬ ಆಚರಿಸಿಕೊಳ್ಳುವುದು ದೊಡ್ಡಸ್ತಿಕೆಯಲ್ಲ ಹುಟ್ಟನ್ನ ಸಾರ್ಥಕಗೊಳಿಸುವುದೇ ದೊಡ್ಡತನ.*
ಚಂದ ಬರಹ.. 🥰🥰
ಪ್ರತ್ಯುತ್ತರಅಳಿಸಿಧನ್ಯವಾದಗಳು ☺️
ಅಳಿಸಿಉತ್ತಮವಾಗಿದೆ
ಪ್ರತ್ಯುತ್ತರಅಳಿಸಿಧನ್ಯವಾದಗಳು ☺️
ಅಳಿಸಿExcellent👏👏
ಪ್ರತ್ಯುತ್ತರಅಳಿಸಿಧನ್ಯವಾದಗಳು 🙏
ಅಳಿಸಿWonder full darling
ಪ್ರತ್ಯುತ್ತರಅಳಿಸಿAm Amith HM
ಅಳಿಸಿ