*ಹೆಸರು* - ಜಯಂತ್ ಕಾಯ್ಕಿಣಿ
ಜಯಂತ ಕಾಯ್ಕಿಣಿ
____________________
ಜಯಂತ ಗೌರೀಶ ಕಾಯ್ಕಿಣಿ(ಜನನ : ೨೪,ಜನವರಿ, ೧೯೫೫) [೧] ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು.[೨] ಜಯಂತ್ ರ ಕತೆ-ಕಾವ್ಯಗಳಲ್ಲಿ ಸೂಕ್ಷ್ಮಸಂವೇದನೆ ಬಹುತೇಕ ಕಾಣಸಿಗುವ ವಸ್ತು.ಇಳಿಸಂಜೆಯ ಬಿಸಿಲು,ಬಿಸಿಲುಕೋಲು,ಪಾತರಗಿತ್ತಿ,ಬಣ್ಣ ಅವರ ಬರಹಗಳಲ್ಲಿ ಸಾಮಾನ್ಯವಾಗಿ ಪ್ರತಿಫಲಿಸುತ್ತಲೇ ಇರುತ್ತವೆ. ಮೆದುಮಾತಿನ,ಮೆಲುದನಿಯ ವ್ಯಕ್ತಿತ್ವ ಅವರದು.[೩]ಸಾಹಿತ್ಯ ಪ್ರಕಾರಗಳ ಹಲವು ವಿಭಾಗಗಳಲ್ಲಿ, ಕವಿಯಾಗಿ, ಈಟಿವಿ ಕನ್ನಡ ವಾಹಿನಿಯಲ್ಲಿ ಸಂದರ್ಶಕನಾಗಿ, ಸಿನೆಮಾ ಹಾಡುಗಳ ಸಾಹಿತಿ,ಸಂಭಾಷಣೆಗಾರನಾಗಿ, ಅಂಕಣಕಾರ ನಾಗಿ, ನಾಟಕಕಾರನಾಗಿ, ಕಥೆಗಾರನಾಗಿ, ಮತ್ತು ಕನ್ನಡಿಗರ (ಸಾಗರದಾಚೆಗೂ ನೆಲೆ ನಿಂತಿರುವ ಕನ್ನಡಿಗರ) ಅಚ್ಚುಮೆಚ್ಚಿನ ಲೇಖಕರಾಗಿದ್ದಾರೆ..
ಇಗೋ ಅವರ ಕವಿತೆ:
ಹೆಸರು
******
ಬಂದ ಕೆಲಸ ಮುಗಿಸಿ ಹೋದರಾಗದೆ
ಸುಮ್ಮನೆ ಕೇಳುತ್ತಾರೆ
ಪಂಜರದ ಹುಡುಗಿಯ ಹೆಸರ
ಗೊತ್ತು ಅವಳಿಗೆ ಅದೆಲ್ಲ
ಹಾಗೆಂದೇ ಇಟ್ಟು ಕೊಟ್ಟಿದ್ದಾಳೆ
ಎರಡೇ ಗುಂಡಿಯ ಬ್ಲೌಸಿನೊಳಗೆ
ಎಷ್ಟೊಂದು ಬಗೆಯ ಹೆಸರ
ಕೇಳಿದವನ ವಯ ತೂಕ ಬಣ್ಣ ನೋಡಿ ತೆಗೆಯುತ್ತಾಳೆ
ನಂತರ ಅವರು ನಂಬಿದವರಂತೆ
ಆ ಸುಳ್ಳು ಹೆಸರಿಂದ ಅವಳ ಕರೆಯುತ್ತ
ಒಂದು ಸಣ್ಣ ಆಟ ನಡೆಸುತ್ತಾರೆ
ತಿಳಿದವಳಂತೆ ನಕ್ಕರೆ ಯಾಕೆ ನಗುತ್ತಿ ಎಂದು ಕೇಳಿಯಾರು
ಟಿಪ್ಸ್ ಸಮಯ ಹಾಗೆಲ್ಲ ಕೆರಳಿಸಿದರೆ ತರವಲ್ಲ...!
ರಸ್ತೆಯಲ್ಲಿ ಹೆಸರಿಗಳಿಗೇನೂ ಬರವಿಲ್ಲ..!
ಬೇಕಾದ್ದು ಬೇಕಾದಲ್ಲಿಂದ ಹೆಕ್ಕಬಹುದು
ಚ್ಯುಯಿಂಗ್ ಗಮ್ಮಿನಂತೆ ಜಗದು ಜಗದು
ನಂತರ ಗುಪ್ತವಾಗಿ ಎಲ್ಲೋ ಅಂಟಿಸಿ
ಹೋಗಿಬಿಡಬಹುದು..
ಹೇಳು ಪಾರ್ಟ್ನರ್
ಅದೆಷ್ಟು ಜನ ಒರಗಿದ್ದಾರೀ ಉಪಗ್ರಹದಲ್ಲಿ
ಹೆಸರು ಪಾಪಿಗಳದ್ದಲ್ಲ
ಪಾಪದ್ದು...
ಅದಕ್ಕೆ ಮತ್ತೆ
ಗುಂಡಿ ಹಾಕುತ್ತ ಸಂಭಾವಿತ ಲೋಕಕ್ಕೆ
ಹೊರಟು ನಿಂತವರನ್ನೆಂದೂ ಅವಳು
ಹಿಂದೆ ಕರೆದು ಹೆಸರು ಕೇಳುವುದಿಲ್ಲ..!!
ಕವಿ - ಜಯಂತ ಕಾಯ್ಕಿಣಿ
ಕವನ ಸಂಕಲನ - ಜಿಲೇಬಿ
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ